ನನ್ನಾತ್ಮದ ಕನ್ನಡಿಯಲ್ಲಿ

ಇರಬೇಕಿತ್ತು ನೀನುನನ್ನಾತ್ಮದ ಕನ್ನಡಿಯಲಿ ದೂಳು ಕೂರದಂತೆನನ್ನ ಪ್ರಜ್ಞೆಯಾಳದೊಳಗೆ ಅಹಮ್ಮಿನ ಮುಳ್ಳು ಬೆಳೆಯದಂತೆನನ್ನ ಹೃದಯದಾಳದಲಿ ಪಾಪಿಷ್ಠ ಲಹರಿಗಳುಗುನುಗದಂತೆ ನೋಡಿಕೊಳ್ಳಲು. ಜನರಹಿತ ರಾತ್ರಿಯ ಬೆತ್ತಲು ರಸ್ತೆಗಳಲ್ಲಿಸಂಜೆ ಉರಿಸಿದ ಚಿತೆಯ ಬೆಂಕಿ ಆರದ ಮಸಣಗಳಲಿಗತದ ನೆನಪುಗಳೆಲ್ಲ ಹಾವುಗಳಂತೆ ಹರಿದಾಡುವಅಸಹನೀಯ ಕ್ಷಣಗಳ ಪಯಣದಲಿ. ಎಂದೂ ಮಳೆಯಾಗದಬೀಜ ಸಸಿಯಾಗದಸಸಿ ಮರವಾಗಿಮರ ಹೂವರಳಿಸಿ ಹಣ್ಣುಗಳ ಫಲಿಸಿತಾಯಾಗಲಾರದಂತಹ ತೀರಗಳಿರದರುದ್ರಭೀಕರ ಮರಳುಭೂಮಿಯನಡುವಲ್ಲೂ ಹಸಿರು ಚಿಗುರಿಸುವಛಲದೊಡತಿ ನೀನಿರಬೇಕಿತ್ತು ಮುಗಿದ ನನ್ನಿಷ್ಟಕಾಲದ ಜೊತೆಗೆಆರಂಭಗೊಂಡ ಕಷ್ಟಕಾಲದಲಿನೀನಿರಬೇಕಿತ್ತು ನನ್ನಾತ್ಮದ ಕನ್ನಡಿಯಲ್ಲಿ! ****** ಕು.ಸ.ಮಧುಸೂದನ್